Monday, March 22, 2010

ನಿವೇದನೆ
ಒಂದು ಸನ್ನಿವೇಶ

ಕೌಶಿಕ್ ತನ್ನ ೫ ವರ್ಷದ ಮಗಳೊಂದಿಗೆ ಸಮುದ್ರ ತೀರಕ್ಕೆ ಬಂದಿದ್ದ, ತನ್ನ ಮಗಳು ಮರಳಲ್ಲಿ ಆಡುತ್ತಿರುವದುನ್ನು ಕಂಡು ಖುಷಿ ಪಡುತ್ತಿದ್ದ, ಪಶ್ಚಿಮದಲ್ಲಿ ಸೂರ್ಯ ತನ್ನ ಕೆಲಸ ಕಾರ್ಯಗಳನ್ನು ಮುಗಿಸಿ ಮುಳಗತೊಡಗಿದ್ದ, ಚಂದ್ರನು ಸಹ ತನ್ನ ಮೊಗವನ್ನು ತೋರಿಸತೊಡಗಿದ, ಅದನ್ನೇ ನೋಡುತ್ತಾ ತನ್ನ ಮಗಳ ಕಡೆ ಗಮನ ಹರಿಸುತ್ತಾ ಏನೋ ನೆನೆಯುತ್ತಾ ತನ್ನ ಸಂಜೆಯನ್ನು ಕಳೆಯತೊಡಗಿದ ಕೌಶಿಕ್.

ದೂರದಿಂದ ಒಂದು ಧ್ವನಿ ಕೇಳಿಸಿತು, ಧ್ವನಿ ನಿಧಾನವಾಗಿ ಜೋರಾಗತೊಡಗಿತು "ಕೌಶಿಕ್... ಕೌಶಿಕ್" ಎಂದು ಯಾರೋ ಕೂಗಿಕೊಂಡು ಒಂದು ಮಗುವಿನ ಹಿಂದೆ ಓಡುತ್ತಾ ಬರುವುದು ಕಾಣಿಸಿತು , ಆ ಧ್ವನಿಯು ಅವನಿಗೆ ಚಿರಪರಿಚಿತವಾದುದ್ದೆ ,ಅವಳೇ ಶರ್ಮಿಳೆ. ಅವಳು ಹತ್ತಿರ ಬರುತ್ತಿದ್ದಂತೆ ಕೌಶಿಕನ ಎದೆ ಒಂದು ಕ್ಷಣ ನಿಂತಂತೆಯೇ ಆಯಿತು. ಒಂದು ಕಾಲದಲ್ಲಿ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹುಡುಗಿಯ ನೋಡಿ ಅವನ ಜೀವ ಜಲ್ಲೆಂದಿತು, ಶರ್ಮಿಳೆಯು ಅವನನ್ನು ನೋಡಿದ ಕೂಡಲೇ ಶಿಲೆಯಂತೆ ನಿಂತುಬಿಟ್ಟಳು, ಇಬ್ಬರಿಗೂ ಏನು ಮಾತನಾಡಬೇಕೆಂದು ತಿಳಿಯದೆ ಹೋಯಿತು, ಕಣ್ಣುಗಳೇ ಮಾತನಾಡತೊಡಗಿದವು. ಪ್ರೀತಿಯ ನಿವೇದನೆ ಕಣ್ಣುಗಳಲ್ಲಿಯೇ ನಡೆಯತೊಡಗಿತು.

"ಹೇಗಿದ್ದೀಯ?" ಶರ್ಮಿಳೆಯ ಕಣ್ಣಗಳು ಕೌಶಿಕನ ಕಣ್ಣುಗಳನ್ನು ಕೇಳಿತು, "ಹೂ ಇದ್ದೀನಿ" ಎಂಬ ಉತ್ತರ ಇವನ ಕಣ್ಣುಗಳಿಂದ. ಇಬ್ಬರಿಗೂ ತುಂಬಾ ಮಾತನಾಡಬೇಕೆನಿಸದರೂ ಆಗುತ್ತಿರಲಿಲ್ಲ, ಮಧ್ಯದಲ್ಲಿ ಮಕ್ಕಳ ಕಡೆ ಒಮ್ಮೊಮ್ಮೆ ನೋಡುತ್ತಾ ಕಣ್ಣಿನಲ್ಲೇ ಇಬ್ಬರೂ ಮಾತನಾಡುತ್ತಾ ನಿಂತರು.
"ಏಕೆ ಹೀಗೆ ಮಾಡಿದೆ?" ಎಂದು ಕೇಳಿತು ಅವನ ಕಣ್ಣು. "ನನ್ನ ಪರಿಸ್ಥಿತಿ ಹಾಗಿತ್ತು" ಎಂಬ ಉತ್ತರ ಆ ಕಡೆಯಿಂದ.ಶರ್ಮಿಳೆಗೆ ತಡೆಯಲಾಗಲಿಲ್ಲ, ಅವಳ ಕಣ್ಣಿನಲ್ಲಿ ನೀರು ಮುತ್ತಾಗಿ ಒಂದೊಂದೇ ಬರತೊಡಗಿದವು. ಅದರಲ್ಲಿ ಮೊದಲ ಮುತ್ತು ಆ ಸಮುದ್ರ ದಂಡೆಯ ಮರಳನ್ನು ಸೇರುವ ಮೊದಲೇ ಇನ್ನೊಂದು ಧ್ವನಿ ಶರ್ಮಿಳೆಯನ್ನು ಅರಸುತ್ತ ಬಂದಿತು. ಆ ಧ್ವನಿ ಶರ್ಮಿಳೆಯ ಗಂಡನದ್ದಾಗಿತ್ತು. ಗಂಡನ ಕಂಡ ಕೂಡಲೇ ಅವಳು ಮಗನನ್ನು ಎತ್ತಿಕೊಂಡು ಹೊರಡಲು ಸಿದ್ದಳಾದಳು.
ಮನಸಿನಲ್ಲಿ ಸಾವಿರ ಪ್ರೆಶ್ನೆಗಳನ್ನು ತುಂಬಿಕೊಂಡು ಕೇಳಲು ಸಿದ್ಧನಾಗಿದ್ದ ಕೌಶಿಕನ ಕಣ್ಣುಗಳನ್ನು ತಿರಸ್ಕರಿಸಿ ಹೊರಟಳು ಶರ್ಮಿಳೆ.ಕಣ್ಣಿನಲ್ಲೇ "ಬರಲೇ?" ಎಂಬ ಪ್ರೆಶ್ನೆ, ಕೌಶಿಕನ ಕಣ್ಣಿನಲ್ಲಿ ಅದಕ್ಕೆ ಉತ್ತರವಿರಲಿಲ್ಲ. ಬಹುಷಃ "ಚೆನ್ನಾಗಿರು" ಎಂದಿತು.

ಅವಳು ಹೋಗುವುದನ್ನೇ ನೋಡುತ್ತಾ ಸಮುದ್ರದ ಕಡೆಗೆ ಮುಖ ಮಾಡಿದ ಕೌಶಿಕ್, ಇಷ್ಟು ಹೊತ್ತು ತುಂಬಾ ಸುಂದರವಾಗಿ ಕಂಡ ಸೂರ್ಯಾಸ್ತ ಏಕೋ ಅವನಿಗೆ ವಿಕಾರವೆನಿಸಿತು, ಸೂರ್ಯನು ಇಡೀ ಜಗತ್ತಿಗೆ ರಕ್ತತುಂಬಿ ಹೋಗುತ್ತಿರುವನೇನೋ ಎಂದೆನಿಸಿತು. ಕೌಶಿಕ ತನ್ನ ಮಗಳು ಶರ್ಮಿಳೆಯನ್ನು ಎತ್ತಿಕೊಂಡು ಮನೆ ಕಡೆಗೆ ಹೊರಟ. ಮನಸಿನಲ್ಲಿಯೇ ಅವನಿಗೆ ಕೆಲವೇ ಸಾಲುಗಳು ನೆನಪಾಯಿತು.

ನೀ ಕನಸಾಗಿ ಬಂದೆ
ನೀ ಕನಸಾಗಿ ಕಾಡಿದೆ
ಕನಸು ನನಸು ಮಾಡುವ ಆಸೆ ತೋರಿದೆ
ಆ ಭ್ರಮೆಯೆಂಬ ಕನಸಿನಲ್ಲಿಯೇ ನಾ ನಡೆದೆ
ನೀ ಕನಸಾಗಿಯೇ ಸೆಳೆದೆ
ನೀ ಕನಸಾಗಿಯೇ ಉಳಿದೆ
--
ಮಜಾ ಮಾಡಿ ,
ಅಮಿತ್ ಎ

4 comments:

  1. ನೀ ಕನಸಾಗಿ ಬಂದೆ
    ನೀ ಕನಸಾಗಿ ಕಾಡಿದೆ
    ಕನಸು ನನಸು ಮಾಡುವ ಆಸೆ ತೋರಿದೆ
    ಆ ಭ್ರಮೆಯೆಂಬ ಕನಸಿನಲ್ಲಿಯೇ ನಾ ನಡೆದೆ
    ನೀ ಕನಸಾಗಿಯೇ ಸೆಳೆದೆ
    ನೀ ಕನಸಾಗಿಯೇ ಉಳಿದೆ

    Maga true love prabava na??

    ReplyDelete
  2. @ Vijayendra Mudigal: its overall life experience.. nothing related to true love or some sort..

    ReplyDelete
  3. Nice small story. Hope we will continue to have such kind of mini "kate" in future also...!

    ReplyDelete